ಇತ್ತೀಚಿನ ಪ್ರಕಟಣೆಗಳು

26-06 ವಿಟಿಯು - ಕೋರ್ಸವಾರು ಅರ್ಹತೆ
25-06 ಸಿಇಟಿ 2020 - ಅಧಿಸೂಚನೆ - ಆನ್‌ಲೈನ್ ಅಪ್ಲಿಕೇಶನ್ ತಿದ್ದುಪಡಿ (26-ಜೂನ್ -2020 ರಿಂದ 29-ಜೂನ್ -2020)
16-06 ಡಿಪ್ಲೊಮಾ ಸಿ ಇ ಟಿ 2020 - ಆನ್‌ಲೈನ್ ಅರ್ಜಿ
15-06 ಇಂದಿನಿಂದ (ಅಂದರೆ 15.06.2020 ರ ಮಧ್ಯಾಹ್ನ 2.00 ಗಂಟೆಯಿಂದ ) ಆರಂಭವಾಗಬೇಕಾಗಿದ್ದ ಪಿಜಿಇಟಿ 2020 ಎರಡನೇ ಸುತ್ತಿನ ಆಯ್ಕೆ ನಮೂದು (ಆಪ್ಷನ್ ಎಂಟ್ರಿ ) ಯನ್ನು ಸ್ಥಗಿತಗೊಳಿಸಲಾಗಿದೆ . ಮುಂದಿನ ಮಾಹಿತಿಯನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು
15-06 ಪಿಜಿಇಟಿ 2020 - ಪಿಜಿ ವೈದ್ಯಕೀಯ / ದಂತವೈದ್ಯಕೀಯ ಪ್ರವೇಶಕ್ಕಾಗಿ 2ನೇ ಸುತ್ತಿಗೆ ಹೊಸದಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಇದುವರೆಗೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗದೆ ಇದ್ದಲ್ಲಿ, ದಿನಾಂಕ 17-06-2020 ರಂದು ಬೆಳಿಗ್ಗೆ 11 ಗಂಟೆಯವರೆಗೆ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಮತ್ತೊಮ್ಮೆ ಕೊನೆಯ ಅವಕಾಶವನ್ನು ನೀಡಲಾಗಿದೆ. ಪೋರ್ಟಲ್‌ ಮುಖಂತರ ಅಪ್‌ಲೋಡ್ ಮಾಡದೆ ಇರುವ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು ಇದುನ್ನು ಅಂತಿಮ ಅವಕಾಶವೆಂದು ತಿಳಿಯತಕ್ಕದ್ದು.
15-06 ಪಿಜಿ ಸಿಇಟಿ 2020 - ಆನ್‌ಲೈನ್ ಅರ್ಜಿ
15-06 ಪಿಜಿ ಸಿಇಟಿ-2020 - ಮಾಹಿತಿ ಪುಸ್ತಕ
12-06 ಪಿಜಿಇಟಿ 2020- ಎರಡನೇ ಸುತ್ತಿನ ತಾತ್ಕಾಲಿಕ ಪರಿಶೀಲಿಸಿದ ಪಟ್ಟಿ
10-06 ಡಿಪ್ಲೊಮಾ ಸಿ ಇ ಟಿ 2020 - ಪ್ರಕಟಣೆ
10-06 ಪಿಜಿ ಸಿಇಟಿ-2020 (ಎಮ್ ಬಿ ಎ, ಎಂಸಿಎ, ಎಮ್ ಟೆಕ್) - ಪ್ರಕಟಣೆ
06-06 ಪಿಜಿಇಟಿ 2020- ಅಪ್ಲಿಕೇಶನ್ ಪ್ರಿಂಟ್
05-06 ಪಿಜಿಇಟಿ 2020- ಎರಡನೇ ಸುತ್ತಿನ ಡಾಕ್ಯುಮೆಂಟ್ ಅಪ್‌ಲೋಡ್
04-06 ಕೆಇಎ ಯುಪಿಎಸ್ ವಾರ್ಷಿಕ ನಿರ್ವಹಣೆಗೆ ದರ ಪಟ್ಟಿ ಕರೆಯಲಾಗಿದೆ
03-06 ಪಿಜಿಇಟಿ 2020- ಸೀಟು ರದ್ದು ಕುರಿತು ಸೂಚನೆ
03-06 ಟ್ಯಾಲಿ ಸಾಫ್ಟ್‌ವೇರ್ ಇಆರ್‌ಪಿ 9 ನವೀಕರಿಸಲು ಉದ್ಧರಣವನ್ನು ಆಹ್ವಾನಿಸಲಾಗಿದೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಗ್ಗೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗೌರವಾನ್ವಿತ ಉನ್ನತ ಶಿಕ್ಷಣ ಮಂತ್ರಿ GOK ನೇತೃತ್ವದ ಅಡಿಯಲ್ಲಿ ಕೆಳಕಡಂತೆ ಕಾರ್ಯನಿರ್ವಹಿಸುತ್ತದೆ.

ಆಡಳಿತ ಮಂಡಳಿ ಸಮಿತಿ

ಕಾರ್ಯಕಾರಿ ಸಮಿತಿ

ಇತರೆ ಸಮಿತಿ

ಸಂಘದ ಜ್ಞಾಪಕ ಪತ್ರ

ಸಿ ಇ ಟಿ ಬಗ್ಗೆ

ಕರ್ನಾಟಕ ಸರ್ಕಾರವು, ವೃತ್ತಿಶಿಕ್ಷಣ ಕೋರ್ಸುಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪತಿ (ಆಯುಶ್ ), ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಡೆಸುವುದಕ್ಕೆ ಮತ್ತು ಪ್ರವೇಶ ನೀಡುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೆರಿಟ್ ಅನ್ನು ನಿರ್ಧರಿಸುವುದಕ್ಕಾಗಿ, ಮೊದಲ ಬಾರಿಗೆ ಪೂರ್ಣ ಸಮಯದ ಸೆಮಿಸ್ಟರಿಗೆ 1994ನೇ ವರ್ಷದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ಸ್ಥಾಪಿಸಿತು.

ಸರ್ಕಾರಿ ಸೀಟುಗಳಿಗೆ ಪ್ರವೇಶವನ್ನು, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಆಯ್ಕೆ ನಿಯಮಗಳು, 2006 (ಸಂಕ್ಷಿಪ್ತವಾಗಿ ನಿಯಮಗಳು) ಇದನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವುದಕ್ಕೆ ಅನುಸಾರವಾಗಿ ಮಾಡಬೇಕಿರುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ / ದಂತ ವೈದ್ಯಕೀಯ / ಆಯುಶ್ ಕೋರ್ಸ್ಸ್ ಸೀಟುಗಳನ್ನು ನೀಟ್ ಸ್ಕೋರ್ ಆಧಾರದ ಮೇಲೆ ಕರ್ನಾಟಕ ಸರ್ಕಾರದ ನೀಡಿದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಹಂಚಿಕೆ ಮಾಡುತ್ತದೆ.

ಸರ್ಕಾರ ಆದೇಶ ಸಂಖ್ಯೆ ಇಡಿ/212/ ಟಿಇಸಿ 2006 ದಿನಾಂಕ 20-12.2006ರ ಮೂಲಕ, ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ``ಕರ್ನಾಟಕ ಪರೀಕ್ಷಾ ಪ್ರಾಧಿಕಾರ'' (ಕ.ಪ.ಪ್ರಾ) ಎಂದು ಬದಲಾಯಿಸಿ, ಸೊಸೈಟಿಗಳ ನೋಂದಣಿ ಅಧಿನಿಯಮ 1960ರ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸಲಾಗಿದೆ.